🏆📙𝐉𝐍𝐀𝐍𝐀𝐃𝐄𝐄𝐏𝐓𝐈📙🏆
☞𝚂𝚞𝚋𝚓𝚎𝚌𝚝 𝚁𝚎𝚕𝚊𝚝𝚎𝚍:CET date .
☞𝚂𝚞𝚋𝚓𝚎𝚌𝚝𝚕𝚊𝚗𝚐𝚞𝚊𝚐𝚎:𝙺𝚊𝚗𝚗𝚊𝚍𝚊
☞𝚁𝚎𝚕𝚊𝚝𝚎𝚍 𝙳𝚎𝚙𝚊𝚛𝚝𝚖𝚎𝚗𝚝 :𝙰𝚕𝚕.
☞𝙿𝚕𝚊𝚌𝚎 : 𝙺𝚊𝚛𝚗𝚊𝚝𝚊𝚔𝚊.
☞𝙳𝚊𝚝𝚎 𝚘𝚏 𝙿𝚞𝚋𝚕𝚒𝚜𝚑𝚎𝚍:28/03/2022
☞𝚂𝚞𝚋𝚓𝚎𝚌𝚝 𝙵𝚘𝚛𝚖𝚊𝚝: 𝚓𝚙𝚓/𝚙𝚍𝚏
☞𝚂𝚞𝚋𝚓𝚎𝚌𝚝 𝚜𝚒𝚣𝚎:𝟿𝟻𝚔𝚋
☞𝙽𝚞𝚖𝚋𝚎𝚛 𝚘𝚏 𝚙𝚊𝚐𝚎𝚜:2
☞𝚂𝚌𝚊𝚗𝚎𝚍 𝚌𝚘𝚙𝚢: 𝚈𝚎𝚜
☞𝙴𝚍𝚒𝚝𝚊𝚋𝚕𝚎 𝚃𝚎𝚡𝚝 : No
☞𝙿𝚊𝚜𝚜𝚠𝚘𝚛𝚍 𝙿𝚛𝚘𝚝𝚎𝚌𝚝𝚎𝚍 :𝙽𝚘
☞𝙻𝚒𝚗𝚔 𝙳𝚘𝚠𝚗𝚕𝚘𝚊𝚍 : 𝙰𝚟𝚒𝚕𝚊𝚋𝚕𝚎
☞𝙲𝚘𝚙𝚢 𝚃𝚎𝚡𝚝 : 𝙽𝚘
☞𝙿𝚛𝚒𝚗𝚝𝚒𝚗𝚐 𝙴𝚗𝚊𝚋𝚕𝚎: 𝚈𝚎𝚜!
☞𝚀𝚞𝚊𝚕𝚒𝚝𝚢 𝚘𝚏 𝚜𝚞𝚋𝚓𝚎𝚌𝚝: 𝙷𝚒𝚐𝚑
☞𝚂𝚞𝚋𝚎𝚌𝚝 𝚜𝚒𝚣𝚎 𝚁𝚎𝚍𝚞𝚌𝚎𝚍:𝙽𝚘
☞𝙿𝚊𝚜𝚜𝚠𝚘𝚛𝚍 :𝙽𝚘!
☞𝙲𝚘𝚜𝚝 𝚘𝚏 𝚂𝚞𝚋𝚎𝚌𝚝 : 𝙵𝚛𝚎𝚎!!
☞𝚄𝚜𝚎 𝙿𝚎𝚛𝚜𝚘𝚗𝚊𝚕𝚕𝚢
☞𝚂𝚊𝚟𝚎 𝚆𝚊𝚝𝚎𝚛 !𝚂𝚊𝚟𝚎 𝙵𝚘𝚛𝚎𝚜𝚝!
Welcome to jnanadeepti site
this site gives you educational and employment news
CET DATES ARE ANNOUNCED
ಬೆಂಗಳೂರು: ವೃತ್ತಿಪರ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕಾಗಿ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯ (Common Entrance Test - CET) ದಿನಾಂಕ ನಿಗದಿಯಾಗಿದೆ. ಜೂನ್ 16, 17, 18ರಂದು ಸಾಮಾನ್ಯ ಪ್ರವೇಶ ಪರೀಕ್ಷೆಗಳು ನಡೆಯಲಿವೆ. ಜೂನ್ 16ರಂದು ಬೆಳಗ್ಗೆ ಜೀವಶಾಸ್ತ್ರ, ಮಧ್ಯಾಹ್ನ ಗಣಿತ, 17ರಂದು ಬೆಳಗ್ಗೆ ಭೌತಶಾಸ್ತ್ರ, ಮಧ್ಯಾಹ್ನ ರಸಾಯನಶಾಸ್ತ್ರ, 18ರಂದು ಹೊರನಾಡು ಗಡಿನಾಡು ಕನ್ನಡಿಗರಿಗೆ ಪರೀಕ್ಷೆಗಳು ನಡೆಯಲಿವೆ.
ಏಪ್ರಿಲ್ 5ರಿಂದ 20ರವರೆಗೆ ಸಿಇಟಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ. ಏಪ್ರಿಲ್ 22ರವರೆಗೆ ಶುಲ್ಕ ಪಾವತಿಗೆ ಅವಕಾಶ ಇರುತ್ತದೆ. ಮಾಹಿತಿ ಪರಿಷ್ಕರಣೆಗೆ ಮೇ 2ರಿಂದ 6ರವರೆಗೆ ಅನುಮತಿ ನೀಡಲಾಗಿದೆ. ಮೇ 30ರಿಂದ ಪ್ರವೇಶ ಪತ್ರಗಳನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಮಾಹಿತಿ ನೀಡಿದರು.
ಇತರ ರಾಜ್ಯಗಳಲ್ಲಿ ಈಗಾಗಲೇ ಪರೀಕ್ಷೆಯ ಸಂಭನೀಯ ದಿನಾಂಕಗಳು ಪ್ರಕಟವಾಗಿವೆ. ಅದರಂತೆ ರಾಜ್ಯದಲ್ಲಿಯೂ ಸಿಇಟಿ ಪರೀಕ್ಷೆಗೆ ದಿನಾಂಕ ನಿಗದಿ ಮಾಡಲಾಗಿದೆ ಎಂದು ಅವರು ಹೇಳಿದರು.
ವಿವಿಧ ಕಾರಣಗಳಿಂದಾಗಿ ನೀಟ್ ಪರೀಕ್ಷೆ (NEET) ವಿಳಂಬವಾಗಿರುವ ಕಾರಣ ಸಿಇಟಿಗೆ ಅರ್ಜಿ ಅಹ್ವಾನವು ತಡವಾಗಿದೆ ಎಂದು ಸಚಿವ ಅಶ್ವತ್ಥನಾರಾಯಣ ಇತ್ತೀಚೆಗೆ ಹೇಳಿದ್ದರು. ಸಾಮಾನ್ಯವಾಗಿ ಜನವರಿಯಲ್ಲಿ ಸಿಇಟಿಗೆ ಅರ್ಜಿ ಆಹ್ವಾನಿಸಲಾಗುತ್ತಿತ್ತು ಎಂದು ತಿಳಿಸಿದ್ದರು.
ಉಕ್ರೇನ್ನಲ್ಲಿ ಹಾವೇರಿಯ ನವೀನ್ ಗ್ಯಾನಗೌಡರ್ ನಿಧನರಾದ ನಂತರ ನೀಟ್ ಪರೀಕ್ಷೆಯ ಬದಲು ಸಿಇಟಿಗೆ ಹೆಚ್ಚಿನ ಮಹತ್ವ ಕೊಡಬೇಕು. ಅದನ್ನೇ ಆಧರಿಸಿ ವೈದ್ಯಕೀಯ ಶಿಕ್ಷಣಕ್ಕೆ ಅವಕಾಶ ಕೊಡಬೇಕು ಎಂಬ ಆಗ್ರಹ ಕೇಳಿಬಂದಿತ್ತು. ವಿರೋಧ ಪಕ್ಷದ ನಾಯಕರಾದ ಎಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ನ ಯು.ಟಿ.ಖಾದರ್ ಸಹ ಇದೇ ಒತ್ತಾಯ ಮಾಡಿದ್ದರು. ಆದರೆ ಸಚಿವ ಅಶ್ವತ್ಥ ನಾರಾಯಣ ನೀಟ್ ವ್ಯವಸ್ಥೆಯನ್ನು ಸಮರ್ಥಿಸಿಕೊಂಡಿದ್ದರು.
ನೀಟ್ನ ಶುಲ್ಕ ವ್ಯವಸ್ಥೆಯ ಬಗ್ಗೆ ಪ್ರತಿಕ್ರಿಯಿಸಿದ್ದ ಅವರು,, ಶೇ 45 ಉಚಿತ ಸೀಟುಗಳನ್ನು ಕೊಡಲಾಗುತ್ತಿದೆ. ಯಾವುದೇ ಮ್ಯಾನೇಜ್ಮೆಂಟ್ ಕಡಿಮೆ ದರದಲ್ಲಿ ಡಾಕ್ಟರ್ ಮಾಡಲು ಸಾಧ್ಯವಿಲ್ಲ. ಎಲ್ಲರೂ ಡಾಕ್ಟರ್ ಆಗಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಹೆಚ್ಚು ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯಲು ಮುಂದಾಗುತ್ತಿದ್ದಾರೆ. ಮೀಸಲಾತಿ ಬಗ್ಗೆ ಮಾತು ಇದ್ದೇ ಇರುತ್ತದೆ. ಕಡು ಬಡವರು ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುತ್ತಾರೆ. ಪ್ರಧಾನಿಗಳಿಗೆ 60:40 ಅನುಪಾತದಲ್ಲಿ ಎಲ್ಲೆಡೆ ಮೆಡಿಕಲ್ ಕಾಲೇಜು ಇರಬೇಕು ಎಂಬ ಹಂಬಲ ಇದೆ. ಹಾಗಾಗಿ ಬಡವರಿಗೂ ಮೆಡಿಕಲ್ ಸೀಟು ಸಿಗುವ ಕೆಲಸ ಆಗುತ್ತಿದೆ. ನೀಟ್ ಮೂಲಕ ವ್ಯವಸ್ಥೆ ಸರಿಪಡಿಸುವ ಕೆಲಸ ಆಗುತ್ತಿದೆ. ನೀಟ್ ಸಾಮಾನ್ಯ ವ್ಯಕ್ತಿಗೂ ನ್ಯಾಯ ಸಿಗುವ ಕೆಲಸ ಮಾಡುತ್ತಿದೆ. ನೀಟ್ ದೇಶದ ಉತ್ತಮ ವ್ಯವಸ್ಥೆ ಆಗಿದೆ. ನೀಟ್ ವಿರೋಧಿಸುವವರು ಹಣ ಮಾಡುವವರು, ದ್ರೋಹಿಗಳು ಎಂದು ಹೇಳಿದ್ದರು.
#CET2022 ಪ್ರಸ್ತಾವಿತ ವೇಳಾಪಟ್ಟಿ ಇಂತಿದೆ -
16/06/2022 - ಜೀವಶಾಸ್ತ್ರ, ಗಣಿತ
17/06/2022 - ಭೌತಶಾಸ್ತ್ರ, ರಸಾಯನಶಾಸ್ತ್ರ
18/06/2022 - ಹೊರನಾಡು ಮತ್ತು ಗಡಿನಾಡ ಕನ್ನಡಿಗರಿಗೆ
ಎಪ್ರಿಲ್ 05 ರಿಂದ CET-2022ರ ನೋಂದಣಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದೆ. ಹೆಚ್ಚಿನ ಮಾಹಿತಿಗಾಗಿ:
ಕೆಳಗಿನ ಪಿಡಿಎಫ್ ಫೈಲ್ ಡೌನ್‍ಲೋಡ್ ಮಾಡಿಕೊಳ್ಳಿ.
Read also
Thanks for visiting
No comments:
Post a Comment